ನಿಯಮ ಮತ್ತು ಷರತ್ತುಗಳು
  • ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸ್ಪರ್ಧಿಗಳು ಕೆಳಗೆ ಪಟ್ಟಿ ಮಾಡಲಾದ ಸ್ಪರ್ಧೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು.
  • ನೀವು ಸರ್ಕಾರದ ಜಾಲತಾಣ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಯಾವುದೇ ಇತರ ಮಾಧ್ಯಮದ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದಿಲ್ಲ.
  • ಈ ಸ್ಪರ್ಧೆಯು ಎಲ್ಲಾ ವಯೋಮಾನದ ಮತ್ತು ವಲಯದ ಸಾರ್ವಜನಿಕರಿಗೆ, ಏಜೆನ್ಸಿಗಳಿಗೆ, ಮತ್ತು ವ್ಯಕ್ತಿಗಳಿಗೆ ಮುಕ್ತವಾಗಿದೆ.
  • ಪ್ರವೇಶ ಪತ್ರ / ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ.
  • ತಾವು ಸಿದ್ಧಪಡಿಸುವ ಬ್ರ್ಯಾಂಡ್ ಹೆಸರು ಸ್ವಂತಿಕೆಯಿಂದ ಕೂಡಿರಬೇಕು ಮತ್ತು ಭಾರತೀಯ ಹಕ್ಕುಸ್ವಾಮ್ಯ ಕಾಯ್ದೆ, 1957ರ ಯಾವುದೇ ನಿಬಂಧನೆ ಅಥವಾ ಯಾವುದೇ ವ್ಯಕ್ತಿಯ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಬಾರದು (ಹೇಗೆ ಪರಿಶೀಲಿಸುವುದು ಎಂದು ತಿಳಿಯಿರಿ).
  • ತಾವು ಸಿದ್ಧಪಡಿಸುವ ಲೋಗೋ ವಿನ್ಯಾಸವು ಸ್ವಂತಿಕೆಯಿಂದ ಕೂಡಿರಬೇಕು ಮತ್ತು ಭಾರತೀಯ ಹಕ್ಕುಸ್ವಾಮ್ಯ ಕಾಯ್ದೆ, 1957ರ ಯಾವುದೇ ನಿಬಂಧನೆ ಅಥವಾ ಯಾವುದೇ ವ್ಯಕ್ತಿಯ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಬಾರದು (ಹೇಗೆ ಪರಿಶೀಲಿಸುವುದು ಎಂದು ತಿಳಿಯಿರಿ).
  • ಲೋಗೋವನ್ನು ಈ ಹಿಂದೆ ಯಾವುದೇ ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಿಸಿರಬಾರದು ಮತ್ತು ಯಾವುದೇ ಪ್ರಚೋದನಕಾರಿ, ಆಕ್ಷೇಪಣಾರ್ಹ ಅಥವಾ ಸೂಕ್ತವಲ್ಲದ ವಿಷಯವನ್ನು ಹೊಂದಿರಬಾರದು.
  • ಯಾವುದೇ ಹಕ್ಕುಸ್ವಾಮ್ಯ ಸಮಸ್ಯೆಗಳು ಉದ್ಭವಿಸಿದಲ್ಲಿ ಅರ್ಜಿದಾರರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಸರ್ಕಾರ, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ಅಥವಾ ರೈತ ಉತ್ಪಾದಕ ಸಂಸ್ಥೆಗಳ ಒಕ್ಕೂಟವು ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.
  • ಯಾವುದೇ ರೀತಿಯ ಕೃತಿಚೌರ್ಯವನ್ನು ಅನುಮತಿಸುವುದಿಲ್ಲ. ಬೇರೆಯವರ ಹಕ್ಕು ಸ್ವಾಮ್ಯವನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಸ್ಪರ್ಧೆಯಿಂದ ಅನರ್ಹಗೊಳಿಸಲಾಗುವುದು.
  • ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆಯ ತಡೆಗಟ್ಟುವಿಕೆ) ಕಾಯಿದೆ 1950ರ ನಿಯಮಗಳನ್ವಯ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ಈ ಕಾಯ್ದೆಯ ಯಾವುದೇ ಉಲ್ಲಂಘನೆಯಾದಲ್ಲಿ ಅನರ್ಹಗೊಳಿಸಲಾಗುತ್ತದೆ.
  • ಉತ್ತಮ ಸಂಪರ್ಕಕ್ಕಾಗಿ ಸ್ಪರ್ಧಿಗಳು ತಮ್ಮ ವೈಯಕ್ತಿಕ ವಿವರಗಳನ್ನು ನಿಖರವಾಗಿ ಒದಗಿಸುವುದು (ಹೆಸರು, ದೇಶ, ಸಂಪೂರ್ಣ ಅಂಚೆ ವಿಳಾಸ, ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆ ಇತ್ಯಾದಿ ವಿವರಗಳನ್ನು ಒಳಗೊಂಡಂತೆ). ಅಪೂರ್ಣ ಸ್ವ-ವಿವರಗಳನ್ನು ಹೊಂದಿರುವ ಅರ್ಜಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
  • ಅರ್ಜಿಗಳ ಸಲ್ಲಿಕೆ, ಸ್ಪರ್ಧೆಯ ತಾಂತ್ರಿಕ ಮಾನದಂಡ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಅನುಸರಿಸುವ ಜವಾಬ್ದಾರಿ ಸಂಪೂರ್ಣವಾಗಿ ಭಾಗವಹಿಸುವವರು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಮೇಲಿರುತ್ತದೆ, ಸರ್ಕಾರ ಅಥವಾ ರೈತ ಉತ್ಪಾದಕರ ಸಂಸ್ಥೆಗಳು ಮೂರನೇ ಪಕ್ಷವು ಎತ್ತುವ ಯಾವುದೇ ವಿವಾದಕ್ಕೆ ಜವಾಬ್ದಾರರಲ್ಲ.
  • ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ, ಕರ್ನಾಟಕ ಸರ್ಕಾರ, ಅಥವಾ ರೈತ ಉತ್ಪಾದಕರ ಸಂಸ್ಥೆಗಳ ಒಕ್ಕೂಟವು ಕೆಟ್ಟುಹೋದ ಅಥವಾ ವಿಳಂಬ ಅರ್ಜಿಗಳಿಗೆ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.
  • ವಿಜೇತರನ್ನು ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ಜಾಲತಾಣದಲ್ಲಿ ಮತ್ತು ಇತರ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಅವರ ಹೆಸರನ್ನು ಘೋಷಿಸಲಾಗುತ್ತದೆ. ವಿಜೇತರನ್ನು ಘೋಷಿಸಿದ ನಂತರ, ಅವನು ಅಥವಾ ಅವಳು 2 ದಿನಗಳೊಳಗೆ ಮಿಂಚಂಚೆಯ ಮೂಲಕ ಉತ್ತರಿಸಬೇಕಾಗುತ್ತದೆ ಇಲ್ಲದಿದ್ದರೆ ಇನ್ನೊಬ್ಬ ವಿಜೇತರನ್ನು ಆಯ್ಕೆ ಮಾಡಬಹುದಾಗಿದೆ.
  • ಎಲ್ಲಾ ಪ್ರಶಸ್ತಿ ವಿಜೇತ ಬ್ರ್ಯಾಂಡ್ ಹೆಸರುಗಳು, ಲೋಗೋಗಳು ಮತ್ತು ಟ್ಯಾಗ್‌ಲೈನ್‌ಗಳು ಶಾಶ್ವತವಾಗಿ ರೈತ ಉತ್ಪಾದಕರ ಸಂಸ್ಥೆಗಳ ಬೌದ್ಧಿಕ ಆಸ್ತಿಯಾಗಿರುತ್ತವೆ ಮತ್ತು ವಿಜೇತರು ಅದರ ಮೇಲೆ ಯಾವುದೇ ಹಕ್ಕನ್ನು ಬಳಸುವಂತಿಲ್ಲ.
  • ರೈತ ಉತ್ಪಾದಕರ ಸಂಸ್ಥೆಗಳ ಒಕ್ಕೂಟ ಅಥವಾ ಅವರ ನಾಮನಿರ್ದೇಶಿತರು ಬಹುಮಾನ - ವಿಜೇತ ಲೋಗೋವನ್ನು ಮಾರ್ಪಡಿಸುವ ಅಥವಾ ಯಾವುದೇ ರೂಪದಲ್ಲಿ ಯಾವುದೇ ಮಾಹಿತಿ/ವಿನ್ಯಾಸದ ವೈಶಿಷ್ಟ್ಯವನ್ನು ಸೇರಿಸುವ/ಅಳಿಸುವ ಹಕ್ಕನ್ನು ಹೊಂದಿರುತ್ತಾರೆ. ವಿಜೇತನು ತನ್ನ ಹೆಸರಿನ ಮೇಲೆ ಯಾವುದೇ ಹಕ್ಕನ್ನು ಚಲಾಯಿಸುವುದಿಲ್ಲ ಮತ್ತು ಅದನ್ನು ಯಾವುದೇ ರೀತಿಯಲ್ಲಿ ಬಳಸಬಾರದು.
  • ಎಲ್ಲಾ ಪ್ರಶಸ್ತಿ ವಿಜೇತ ಅರ್ಜಿಗಳ ಬ್ರ್ಯಾಂಡ್ ಹೆಸರು, ಲೋಗೋ ಮತ್ತು ಟ್ಯಾಗ್‌ಲೈನ್ ಅನ್ನು ರೈತ ಉತ್ಪಾದಕರ ಸಂಸ್ಥೆಗಳ ಒಕ್ಕೂಟವು ಪ್ರಚಾರ ಮತ್ತು ಪ್ರದರ್ಶನದ ಉದ್ದೇಶಗಳಿಗಾಗಿ, ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳಿಗಾಗಿ ಮತ್ತು ಇತರ ಬಳಕೆಗಾಗಿ ಸೂಕ್ತವೆಂದು ಪರಿಗಣಿಸಬಹುದಾಗಿದೆ. ರೈತ ಉತ್ಪಾದಕರ ಸಂಸ್ಥೆಗಳ ಒಕ್ಕೂಟವು ತನ್ನ ಸ್ವಂತ ವಿವೇಚನೆಯಿಂದ ಇತರ ಸಂಸ್ಥೆಗಳಿಗೆ ಬಳಸಲು ಲೋಗೋದ ಹಕ್ಕುಗಳನ್ನು ನೀಡಬಹುದಾಗಿದೆ.
  • ಲೋಗೋವನ್ನು ಜಾಲತಾಣ/ಮೊಬೈಲ್ ಆಪ್/ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್/ಫೇಸ್‌ಬುಕ್/ಇನ್‌ಸ್ಟಾಗ್ರಾಮ್ ಮತ್ತು ನಿಯತಕಾಲಿಕೆಗಳು, ವಾಣಿಜ್ಯ ಹೋರ್ಡಿಂಗ್‌ಗಳು /ಸ್ಟ್ಯಾಂಡೀಸ್ ಮತ್ತು ಕರಪತ್ರಗಳು, ಸ್ಮಾರಕಗಳು ಮತ್ತು ಇತರ ಪ್ರಚಾರ ಮತ್ತು ಮಾರ್ಕೆಟಿಂಗ್ ಸಾಮಗ್ರಿಗಳಲ್ಲಿ ಬಳಸಬಹುದಾಗಿದೆ.
  • ತಿರಸ್ಕೃತ ಅರ್ಜಿಗಳಿಗೆ ಯಾವುದೇ ಅಧಿಸೂಚನೆ ಇರುವುದಿಲ್ಲ.
  • ಈ ಸ್ಪರ್ಧೆ ಮತ್ತು/ಅಥವಾ ನಿಯಮಗಳು ಮತ್ತು ಷರತ್ತುಗಳ/ತಾಂತ್ರಿಕ ನಿಯತಾಂಕಗಳು/ಮೌಲ್ಯಮಾಪನ ಮಾನದಂಡಗಳ ಎಲ್ಲಾ ಅಥವಾ ಯಾವುದೇ ಭಾಗವನ್ನು ರದ್ದುಗೊಳಿಸುವ ಅಥವಾ ತಿದ್ದುಪಡಿ ಮಾಡುವ ಹಕ್ಕನ್ನು ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ಕಾಯ್ದಿರಿಸಿದೆ. ಆದಾಗ್ಯೂ, ನಿಯಮಗಳು ಮತ್ತು ಷರತ್ತುಗಳು/ತಾಂತ್ರಿಕ ನಿಯತಾಂಕಗಳು/ಮೌಲ್ಯಮಾಪನ ಮಾನದಂಡಗಳು ಅಥವಾ ಸ್ಪರ್ಧೆಯ ರದ್ದತಿ/ ಸ್ಪರ್ಧೆಯಲ್ಲಿನ ಯಾವುದೇ ಬದಲಾವಣೆಗಳನ್ನು ಸ್ಪರ್ಧೆಯ ವೇದಿಕೆಯಲ್ಲಿ ಮಾಹಿತಿ ನೀಡಲಾಗುತ್ತದೆ / ಪೋಸ್ಟ್ ಮಾಡಲಾಗುತ್ತದೆ. ನಿಯಮಗಳು ಮತ್ತು ಷರತ್ತುಗಳು/ತಾಂತ್ರಿಕ ನಿಯತಾಂಕಗಳು/ಮೌಲ್ಯಮಾಪನ ಮಾನದಂಡಗಳಲ್ಲಿನ ಯಾವುದೇ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಭಾಗವಹಿಸುವವರ ಜವಾಬ್ದಾರಿಯಾಗಿದೆ.
  • ಯಾವುದೇ ಸಮಸ್ಯೆ / ಸ್ಪಷ್ಟೀಕರಣ ಇತ್ಯಾದಿಗಳ ಸಂದರ್ಭದಲ್ಲಿ, ಇಂಗ್ಲಿಷ್ ಆವೃತ್ತಿಯನ್ನು ಮಾತ್ರ ಅನುಸರಿಸಬೇಕು.
  • ಒಬ್ಬರೇ ಅರ್ಜಿದಾರರ ಬಹು ಸಲ್ಲಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಒಂದೇ ಸಲ್ಲಿಕೆಯನ್ನು ಮಾತ್ರ ಸ್ವೀಕರಿಸಲಾಗುತ್ತದೆ.
  • ನಮೂದನ್ನು ಮೊದಲು ಯಾವುದೇ ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಿಸಬಾರದು.
  • ವಿಜೇತರು ಯಾವುದೇ ಹೆಚ್ಚಿನ ಪರಿಹಾರವಿಲ್ಲದೆ, ರೈತ ಉತ್ಪಾದಕರ ಸಂಸ್ಥೆಗಳ ಒಕ್ಕೂಟಗಳು ಅಥವಾ ಅವರ ನಾಮನಿರ್ದೇಶಿತರು ನಡೆಸುವ ಯಾವುದೇ ಪ್ರಚಾರದಲ್ಲಿ ತಮ್ಮ ಹೆಸರುಗಳನ್ನು (ಅಗತ್ಯವಿದ್ದಲ್ಲಿ) ಬಳಸಲು ತಮ್ಮ ಒಪ್ಪಿಗೆಯನ್ನು ಹಂಚಿಕೊಳ್ಳಬೇಕು.
  • ವಿಜೇತರ ಆಯ್ಕೆಯಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಸಂಪರ್ಕಕ್ಕೆ ಅವಕಾಶ ನೀಡಲಾಗುವುದಿಲ್ಲ
ತಾಂತ್ರಿಕ ಮಾನದಂಡಗಳು
  • ಲೋಗೋವನ್ನು JPEG ಅಥವಾ PNG ರೂಪದಲ್ಲಿ ಮಾತ್ರ ಸಲ್ಲಿಸಬೇಕು.
  • ಸಲ್ಲಿಸುವ ಅರ್ಜಿಯು ಬ್ರ್ಯಾಂಡ್ ಹೆಸರು, ಲೋಗೋ (ಚಿಹ್ನೆ), ಟ್ಯಾಗ್‌ಲೈನ್ ಜೊತೆಗೆ ವಿವರವಾದ ತರ್ಕಬದ್ಧ ಮತ್ತು ಸೃಜನಶೀಲ ಚಿಂತನೆಗಳ ವಿವರಣೆಯೊಂದಿಗೆ ಪೂರ್ಣವಾಗಿರಬೇಕು (100 ಪದಗಳಿಗೆ ಮೀರದಂತೆ).
  • ವೆಬ್‌ಸೈಟ್ /ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್ /ಫೇಸ್‌ಬುಕ್‌ನಲ್ಲಿ ಮತ್ತು ಮುದ್ರಿತ ಮಾಧ್ಯಮಗಳಾದ ಕಪ್ಪು ಮತ್ತು ಬಿಳುಪು ಪತ್ರಿಕಾ ಪ್ರಕಟಣೆಗಳು, ಸ್ಟೇಷನರಿ ಮತ್ತು ಭಿತ್ತಿ ಪತ್ರ / ಲೇಬಲ್‌ಗಳು ಇತ್ಯಾದಿಗಳಲ್ಲಿ ಬಳಸುವಂತಿರಬೇಕು.
  • ಲೋಗೋವನ್ನು ಡಿಜಿಟಲ್ ವೇದಿಕೆಯಲ್ಲಿ ವಿನ್ಯಾಸಗೊಳಿಸಬೇಕು. ಸ್ಪರ್ಧೆಯ ವಿಜೇತರು ವಿನ್ಯಾಸವನ್ನು ಮುಕ್ತ ಮತ್ತು ಪರಿಷ್ಕರಿಸಬಹುದಾದ ಫೈಲ್ ರೂಪದಲ್ಲಿ (ಇಪಿಎಸ್/ಸಿಡಿಆರ್/ಪಿಎಸ್‌ಡಿ) ಸಲ್ಲಿಸಬೇಕು.
  • ಭಾಗವಹಿಸುವವರು ಮೂಲ ಮತ್ತು ಪರಿಷ್ಕರಿಸಬಹುದಾದ ಓಪನ್ ಸೋರ್ಸ್ ಫೈಲ್‌ಗಳನ್ನು ಸಲ್ಲಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
  • ಎಲ್ಲಾ ಫಾಂಟ್‌ಗಳನ್ನು ಔಟಲೈನ್ (outline) ಗಳಾಗಿ ಪರಿವರ್ತಿಸಬೇಕು.
  • ಫೈಲ್ ಹೆಚ್ಚಿನ ರೆಸಲ್ಯೂಶನ್ ಹೊಂದಿರರಬೇಕು (ಪ್ರತಿ ಇಂಚಿಗೆ ಕನಿಷ್ಠ 300 ಪಿಕ್ಸೆಲ್‌ಗಳು 100% ಗಾತ್ರದಲ್ಲಿ).
  • ಲೋಗೋ ವಿಶಿಷ್ಟ ಮತ್ತು ಸ್ಕೇಲೆಬಲ್ ಆಗಿರಬೇಕು. ಇದು ದೊಡ್ಡ ಹೋರ್ಡಿಂಗ್‌ಗಳು, ಸಣ್ಣ ಸರಕುಗಳಲ್ಲಿ ಬಳಸಬಹುದಾದ ಹಾಗೂ ಯಾವುದೇ ವೆಬ್ ಸಾಧನ ಮತ್ತು ಯಾವುದೇ ರೀತಿಯ ಮುದ್ರಣ ಮಾಧ್ಯಮಗಳ ಬಳಕೆಗೆ ಸೂಕ್ತವಾಗಿರಬೇಕು.
  • ನಮೂದುಗಳನ್ನು ಸಂಕುಚಿತ (compressed) ಅಥವಾ ಸ್ವಯಂ-ಹೊರತೆಗೆಯುವ (self-extracting) ಸ್ವರೂಪಗಳಲ್ಲಿ ಸಲ್ಲಿಸಬಾರದು.
  • ಲೋಗೋ ವಿನ್ಯಾಸವನ್ನು ಇಂಪ್ರಿಂಟ್ ಅಥವಾ ವಾಟರ್‌ಮಾರ್ಕ್ ಮಾಡಬಾರದು.
  • ಲೋಗೋ ಬಹು-ಬಣ್ಣದ್ದಾಗಿರಬಹುದು ಆದರೆ ಏಕವರ್ಣದಲ್ಲಿ ಪುನರುತ್ಪಾದನೆಯಾಗುವಂತಿರಬೇಕು.

ಆಯ್ಕೆ ಪ್ರಕ್ರಿಯೆ
  • ಅರ್ಜಿಗಳನ್ನು ರೈತ ಉತ್ಪಾದಕರ ಸಂಸ್ಥೆಗಳ ಒಕ್ಕೂಟದ ಪರವಾಗಿ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ರಚಿಸಿದ ತಜ್ಞರ ಸಮಿತಿಯಿಂದ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಫಲಿತಾಂಶಗಳನ್ನು ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಜಾಲತಾಣ ಮತ್ತು ಇತರ ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು.
  • ಅರ್ಹ ಅರ್ಜಿಗಳಲ್ಲಿ ಸೂಕ್ತವೆಂದು ಕಂಡುಬಂದ ವಿಜೇತರನ್ನು ಸಮೀತಿಯು ಆಯ್ಕೆ ಮಾಡುವುದು.
  • ಸ್ಪರ್ಧಿಗಳ ಸೃಜನಶೀಲತೆ, ಸ್ವಂತಿಕೆ, ಸಂಯೋಜನೆ, ತಾಂತ್ರಿಕ ಶ್ರೇಷ್ಠತೆ, ಸರಳತೆ, ಕಲಾತ್ಮಕ ಅರ್ಹತೆ ಮತ್ತು ದೃಶ್ಯ ಪ್ರಭಾವದ ಆಧಾರದ ಮೇಲೆ ಹಾಗೂ ಥೀಮ್ನ ಸಮರ್ಪಕ ಸಂವಹನವನ್ನು ಪರಿಗಣಿಸಿ ವಿಜೇತರನ್ನು ನಿರ್ಣಯಿಸಲಾಗುವುದು.
  • ಸಮಿತಿಯ ನಿರ್ಧಾರವು ಅಂತಿಮವಾಗಿರುತ್ತದೆ. ಎಲ್ಲಾ ಸ್ಪರ್ಧಿಗಳು ಈ ನಿರ್ಣಯಕ್ಕೆ ಬದ್ಧರಾಗಿರತಕ್ಕದ್ದು ಮತ್ತು ಆಯ್ಕೆ ಸಮಿತಿಯ ಯಾವುದೇ ನಿರ್ಧಾರದ ಮೇಲೆ ಯಾವುದೇ ಸ್ಪಷ್ಟೀಕರಣಗಳನ್ನು ಸ್ಪರ್ಧಿಗಳಿಗೆ ನೀಡಲಾಗುವುದಿಲ್ಲ.
  • ಸ್ಪರ್ಧೆಯಿಂದ ಉಂಟಾಗುವ ಯಾವುದೇ ಕಾನೂನು ಪ್ರಕ್ರಿಯೆಗಳು/ ಅದರ ನಮೂದುಗಳು/ ವಿಜೇತರು ಕರ್ನಾಟಕ ರಾಜ್ಯದ ಸ್ಥಳೀಯ ಅಧಿಕಾರ ವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತವೆ. ಈ ಉದ್ದೇಶಕ್ಕಾಗಿ ಮಾಡಿದ ವೆಚ್ಚಗಳನ್ನು ಅರ್ಜಿದಾರರೇ ಭರಿಸಬೇಕಾಗಿರುತ್ತದೆ.
  • ಯಾವುದೇ ಹಂತದಲ್ಲಿ ಸ್ಪರ್ಧೆಯನ್ನು ಮೊಟಕುಗೊಳಿಸುವ / ಮುಂದುವರೆಸದಿರುವ ಹಕ್ಕನ್ನು ರೈತ ಉತ್ಪಾದಕ ಸಂಸ್ಥೆಗಳ ಒಕ್ಕೂಟ ಅಥವಾ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ ಹೊಂದಿರುತ್ತವೆ.
  • ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.