ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:   15ನೇ ಆಗಸ್ಟ್ 2022, 23:55 IST


ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
15ನೇ ಆಗಸ್ಟ್ 2022, 23:55 IST

ಸವಾಲುಗಳು

ಕರ್ನಾಟಕ ರಾಜ್ಯದಾದ್ಯಂತ ಸಣ್ಣ ರೈತರನ್ನು ಸಂಘಟಿಸಿ ತಮ್ಮದೇ ಆದ ರೈತ ಉತ್ಪಾದಕ ಸಂಸ್ಥೆಗಳಡಿ ರೈತರು ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸಲು ಹಾಗೂ ತಲುಪಿಸಲು ತಮ್ಮ ಉತ್ಪನ್ನಗಳಿಗೆ ಅನ್ವಯವಾಗುವಂತೆ ತಮ್ಮದೇ ಆದ ಬ್ರ್ಯಾಂಡ್ ರಚಿಸಲು ತೀರ್ಮಾನಿಸಿರುತ್ತಾರೆ. ಮಾರುಕಟ್ಟೆಯಲ್ಲಿನ ಇತರೆ ದೊಡ್ಡ ಬ್ರ್ಯಾಂಡ್ಗಳಂತೆ ತಮ್ಮದೇ ಛಾಪು ಮೂಡಿಸಲು ಹಾಗೂ ಗ್ರಾಹಕರನ್ನು ತಲುಪಲು ರೈತ ಉತ್ಪಾದಕ ಸಂಸ್ಥೆಗಳ ಸದಸ್ಯ ರೈತರು ಬಯಸಿರುತ್ತಾರೆ.

ಮೊದಲ ಹಂತದಲ್ಲಿ, ಬೇಳೆಕಾಳುಗಳು, ಸಿರಿಧಾನ್ಯಗಳು, ಬೆಲ್ಲ, ಜೇನುತುಪ್ಪ, ಮೆಣಸಿನಕಾಯಿ, ಮಸಾಲೆಗಳು, ಗೋಡಂಬಿ, ಒಣದ್ರಾಕ್ಷಿ ಇತ್ಯಾದಿಗಳನ್ನು ಏಕೀಕೃತ ಬ್ರ್ಯಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಇಚ್ಛಿಸಿದ್ದು, ನಂತರ ಕಾಲಕ್ರಮೇಣ ಹೆಚ್ಚಿನ ಉತ್ಪನ್ನಗಳನ್ನು ಬ್ರ್ಯಾಂಡ್ ಅಡಿ ತರಲು ಉದ್ದೇಶಿಸಿರುತ್ತಾರೆ. ಆದ್ದರಿಂದ, ಹೆಚ್ಚಿನ ಉತ್ಪನ್ನಗಳನ್ನು ಏಕೀಕೃತ ಬ್ರ್ಯಾಂಡ್ ಅಡಿ ವಿಸ್ತರಿಸಲು ಅವಕಾಶ ಕಲ್ಪಿಸಬೇಕಾಗಿರುತ್ತದೆ.

ರೈತರ ಈ ಆಲೋಚನೆಯನ್ನು ಬೆಂಬಲಿಸಿ ಅವರ ಕನಸನ್ನು ನನಸಾಗಿಸಲು ಬೆಂಬಲ ನೀಡಲು ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಯವರು ನಾಗರಿಕರನ್ನು ಆಹ್ವಾನಿಸಿರುತ್ತಾರೆ.


ನಿಮ್ಮ ಸೃಜನಶೀಲತೆಯಿಂದ ಬ್ರ್ಯಾಂಡ್ ಹೆಸರು, ಆಕರ್ಷಕ ಟ್ಯಾಗ್‌ಲೈನ್ ಮತ್ತು ಸೃಜನಾತ್ಮಕ ಬ್ರ್ಯಾಂಡ್ ಲೋಗೋ (ಚಿಹ್ನೆ) ವನ್ನು ರಚಿಸಿ ತನ್ಮೂಲಕ ರೈತರ ಈ ಕ್ರಮವನ್ನು ಸಕ್ರೀಯಗೊಳಿಸಲು ಮತ್ತು ಅವರಿಗೆ ಅಗತ್ಯವಾದ ಉತ್ತೇಜನವನ್ನು ನೀಡಲು “Citizen Catalyst Challenge” ನಲ್ಲಿ ಭಾಗವಹಿಸಿ.

ಪ್ರತಿಯೊಂದು ಅರ್ಜಿಯು ಬ್ರ್ಯಾಂಡ್ ಹೆಸರು, ಲೋಗೋ (ಚಿಹ್ನೆ) ಮತ್ತು ಟ್ಯಾಗ್‌ಲೈನ್ನನ್ನು ಒಳಗೊಂಡಿರಬೇಕು. ತಾರ್ಕಿಕ ಮತ್ತು ಸೃಜನಶೀಲ ಆಲೋಚನೆಗಳ ವಿವರಣೆಯನ್ನು 150 ಪದಗಳಿಗೆ ಮೀರದಂತೆ ನೀಡಬಹುದು. ಲೋಗೋ, ಟ್ಯಾಗ್‌ಲೈನ್‌ಗಳನ್ನು ಸೂಕ್ತ ಹೆಸರು, ವಿಶಿಷ್ಠತೆ ಹಾಗೂ ಸೃಜನಶೀಲತೆಯ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ಸ್ಪರ್ಧೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು ಮತ್ತು ಷರತ್ತು ಮತ್ತು ನಿಬಂಧನೆಗಳ ಪುಟಗಳನ್ನು ದಯವಿಟ್ಟು ನೋಡಿ.

ನಿಮ್ಮ ಅರ್ಜಿಗಳನ್ನು ಕಾಪಿರೈಟ್ ಅಥವಾ ಟ್ರೇಡ್‌ಮಾರ್ಕ್ ಉಲ್ಲಂಘನೆಗಳಿಗಾಗಿ ಕಡ್ಡಾಯವಾಗಿ ಪರಿಶೀಲಿಸಬೇಕು. ಇದನ್ನು ಹೇಗೆ ಮಾಡಬಹುದು ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಸ್ಪರ್ಧೆಯ ಆರಂಭದ ದಿನಾಂಕ: 8ನೇ ಮೇ 2022.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15ನೇ ಆಗಸ್ಟ್ 2022, 23:55 IST

  • ಮೊದಲನೇ ಬಹುಮಾನ: ರೂ. 75,000/-
  • ಎರಡನೇ ಬಹುಮಾನ: ರೂ. 50,000/-
  • ಮೂರನೇ ಬಹುಮಾನ: ರೂ. 25,000/-

ಶ್ರೇಷ್ಠತೆಯ ಪ್ರಶಸ್ತಿಗಳು: ಮೇಲ್ಕಂಡ ಪ್ರಶಸ್ತಿಗಳನ್ನು ಹೊರತುಪಡಿಸಿ, ಕೆಲವು ಅತ್ಯುತ್ತಮ ಅರ್ಜಿಗಳು, ಲೋಗೋ ಮತ್ತು ಟ್ಯಾಗ್‌ಲೈನ್‌ಗಾಗಿ ಪ್ರತ್ಯೇಕವಾಗಿ ಟ್ರೋಫಿ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು.

ನಿಮ್ಮ ನಮೂದುಗಳನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ