ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

ಸ್ಪರ್ಧೆಯಲ್ಲಿ ಭಾಗವಹಿಸಲು ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿ

ಸ್ಪರ್ಧೆಯಲ್ಲಿ ಯಾರು ಪಾಲ್ಗೊಳ್ಳಬಹುದು?

  • • ಈ ಸ್ಪರ್ಧೆಯಲ್ಲಿ ಯಾರು ಭಾಗವಹಿಸಬಹುದು?
    • ಭಾರತದ ಯಾವುದೇ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

  • • ಈ ಸ್ಪರ್ಧೆಯಲ್ಲಿ ನಾನು ಭಾಗವಹಿಸಲು ನಿರ್ದಿಷ್ಟ ವಯಸ್ಸಿನ ಮಿತಿ ಇದೆಯೇ?
    • ಇಲ್ಲ, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಕನಿಷ್ಟ ಅಥವಾ ಗರಿಷ್ಟ ವಯಸ್ಸಿನ ಮಿತಿ ಇರುವುದಿಲ್ಲ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವರ ಪಾಲಕರಿಂದ ಒಪ್ಪಿಗೆ ಪಡೆಯಬೇಕು. ತಮ್ಮ ಪ್ರವೇಶ ಪತ್ರ ಸ್ವೀಕೃತವಾದ ನಂತರ ತಮ್ಮ ಪೋಷಕರಿಂದ ಒಪ್ಪಿಗೆ ಪತ್ರ ಇದೆಯೇ ಎಂದು ನಾವು ಪರಿಶೀಲಿಸುತ್ತೇವೆ.

  • • ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿಸಲ್ಲಿಸಲು ನಾನು ಭಾರತದ ನಾಗರೀಕತ್ವವನ್ನು ಹೊಂದಿರಬೇಕೆ?
    • ನೀವು ಭಾರತದ ಸಾಗರೋತ್ತರ ನಾಗರಿಕತ್ವ (ಓವರ್‍ಸೀಸ್ ಸಿಟಿಝನ್‍ಶಿಫ್ ಆಫ್ ಇಂಡಿಯಾ) ಅಥವಾ ಭಾರತೀಯ ಮೂಲದ ವ್ಯಕ್ತಿತ್ವ (ಪರ್ಸನ್ ಆಫ್ ಇಂಡಿಯನ್ ಓರಿಜನ್) ಹೊಂದಿದ್ದರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

  • • ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಾನು ಕನಿಷ್ಟ ವಿದ್ಯಾರ್ಹತೆ ಹೊಂದಿರಬೇಕೆ?
    • ಇಲ್ಲ, ಈ ಸ್ಪರ್ಧೆಯು ಯಾವುದೇ ವ್ಯಕ್ತಿಯ ಶೈಕ್ಷಣಿಕ ಅರ್ಹತೆ, ವಯಸ್ಸು, ವೃತ್ತಿಪರ/ಹವ್ಯಾಸಿ ಸ್ಥಿತಿಗತಿಗೆ ಸಂಬಂಧಿಸಿರುವಲ್ಲಿ.

  • • ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಲು ನಾನು ಕರ್ನಾಟಕದ ವಾಸಿಯಾಗಿರಬೇಕೆ?
    • ಇಲ್ಲ, ದೇಶದ ಯಾವುದೇ ಭಾಗದಲ್ಲಿರುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

  • • ನಾನು ಒಂದು ವಿನ್ಯಾಸ ಸಂಸ್ಥೆಯಾಗಿದ್ದೇವೆ, ಹಾಗಾದರೆ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದೇ?
    • ಹೌದು, ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಆದಾಗ್ಯೂ ಈ ಸ್ಪರ್ಧೆಯಲ್ಲಿ ವ್ಯಕ್ತಿಗಳಿಗೆ ಭಾಗವಹಿಸುವದಕ್ಕಾಗಿರುವದರಿಂದ, ನೀವು ಈ ಸ್ಪರ್ಧೆಯಲ್ಲಿ ಭಾಗವಹಿಸುವದಕ್ಕೆ ಇಚ್ಛಿಸಿದಲ್ಲಿ ನೀವು ಅರ್ಜಿಯಲ್ಲಿ ಒಬ್ಬ ಪ್ರತಿನಿಧಿಗಳ ಹೆಸರಿನಲ್ಲಿ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಈ ಸ್ಪರ್ಧೆಯಲ್ಲಿ ನೀವು ಜಯಶಾಲಿಯಾದರೆ ವಯಕ್ತಿಕ ಹೆಸರಿನಲ್ಲಿ ಬಹುಮಾನ ನೀಡಲಾಗುವುದೇ ಹೊರತು ನಮ್ಮ ಸಂಸ್ಥೆ ಅಥವಾ ಗುಂಪಿನ ಹೆಸರಿನಲಲ್ಲ.

ನಾನು ಸ್ಪರ್ಧೆಯಲ್ಲಿ ಹೇಗೆ ಪ್ರವೇಶಿಸಬಹುದು?

  • • ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಯಾವುದು?
    • ಕೊನೆಯ ದಿನಾಂಕ 15ನೇ ಆಗಸ್ಟ್ 2022. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವದಿಲ್ಲ. 

  • • ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಅರ್ಜಿ ಶುಲ್ಕ ಇದೆಯೇ?
    • ಇಲ್ಲ, ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಇದ್ದು ಸಂಪೂರ್ಣ ಉಚಿತವಾಗಿರುತ್ತದೆ.

  • • ನಾನು ಒಂದು ತಂಡವಾಗಿ ಅರ್ಜಿ ಸಲ್ಲಿಸಬಹುದೇ? ನಮ್ಮ ತಂಡದಿಂದ ಮಾಡಲಾದ ಕೆಲಸವನ್ನು ಗುಂಪಿನ ಮೂಲಕ ಸಲ್ಲಿಸಬಹುದೆ?
    • ಇದು ವಯಕ್ತಿಕವಾಗಿ ವ್ಯಕ್ತಿಗಳಿಗಾಗಿ ರೂಪಿಸಲಾದ ಸ್ಪರ್ಧೆ ಆದ್ದರಿಂದ ವಯಕ್ತಿಕ ಭಾಗವಹಿಸುವಿಕೆಯನ್ನು ನಾವು ಪ್ರೋತ್ಸಾಹಿಸುತ್ತೇವೆ. ಒಂದು ವೇಳೆ ತಂಡದ ಪರವಾಗಿ ನಿಮ್ಮ ಕೊಡುಗೆಯನ್ನು ಸೇರಿಸಲು ಬಯಸಿದಲ್ಲಿ ಅದನ್ನು ನಿಮ್ಮ ತಂಡದ ಒಬ್ಬ ಪ್ರತಿನಿಧಿಯ ಹೆಸರುನ್ನು ಸಲ್ಲಿಸಬಹುದಾಗಿದೆ. ಒಂದು ವೇಳೆ ನಿಮ್ಮ ಅರ್ಜಿ/ ಕೊಡುಗೆ ಸ್ಪರ್ಧೆಯಲ್ಲಿ ಜಯಶಾಲಿಯಾದರೆ ಆ ತಂಡವು ಯಾವ ಪ್ರತಿನಿಧಿಯ ಹೆಸರಿನಲ್ಲಿ ಅರ್ಜಿಸಲಿಸಿದೆಯೋ ಅವರಿಗೆ ಬಹುಮಾನ ದೊರೆಯುವುದೇ ಹೊರತಾಗಿ ತಂಡಕ್ಕಲ್ಲ.

  • • ನಾನು ಸ್ಪರ್ಧೆಯಲ್ಲಿ ನನ್ನ ಅಡ್ಡ ಹೆಸರಿನೊಂದಿಗೆ (ನಿಕ್‍ನೇಮ್) ಭಾಗವಹಿಸಬಹುದೇ? ನನ್ನ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ನನಗೆ ಇಷ್ಟ ಇರುವದಿಲ್ಲ.
    • ಇಲ್ಲ, ನೀವು ನಿಮ್ಮ ಅಡ್ಡ ಹೆಸರಿನೊಂದಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲಾಗುವುದಿಲ್ಲ. ಅರ್ಜಿ ತುಂಬುವಾಗ ನಿಮ್ಮ ನೈಜ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಬೇಕು. ಮೊದಲನೇ ಹಂತದ ನಿರ್ಣಯಗಳು ಪ್ರಕಟವಾದಾಗ ನಿಮ್ಮ ಹೆಸರು ಆ ಸುತ್ತಿನಲ್ಲಿ ಆಯ್ಕೆಮಾಡಿದಲ್ಲಿ ಹೆಸರನ್ನು ಪಟ್ಟಿಯಲ್ಲಿ ಪ್ರಕಟಿಸಲಾಗುತ್ತದೆ.

  • • ನಾನು ಸ್ಪರ್ಧೆಯಲ್ಲಿ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಉಪಯೋಗಿಸಿ ಭಾಗವಹಿಸಬಹುದೆ?
    • ಹೌದು, ನೀವು ನಿಮ್ಮ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್‍ನಲ್ಲಿಯ ಬ್ರೌಜರ್ ಉಪಯೋಗಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

  • • ನನಗೆ ಸ್ಪರ್ಧೆಯಲ್ಲಿ ಭಾಗವಹಿಸಲಾಗುತ್ತಿಲ್ಲ, ನನಗೆ ಹೇಗೆ ಪ್ರವೇಶ ಪಡೆಯಬೇಕೆಂದು ತಿಳಿಯುತ್ತಿಲ್ಲ.
    • ಇದು ತುಂಬಾ ಸರಳವಾದ ಪ್ರಕ್ರಿಯೆ. ಅಲ್ಲಿ ನೀಡಲಾದ ಸೂಚನೆಗಳನ್ನು ಗಮನವಿಟ್ಟು ನೋಡಿರಿ. ಆದಾಗ್ಯೂ ನಿಮ್ಮ ಸಮಸ್ಯೆ ಬಗೆಹರಿಯದ್ದಿದರೆ ಒಂದು ಇಮೇಲ್ ಕಳಿಸಿರಿ. ಇಮೇಲ್: enablethefarmer@gmail.com

ಬಹುಮಾನದ ಮೊತ್ತವೆಷ್ಟು?

  • • ಸ್ಪರ್ಧೆಯಲ್ಲಿ ಗೆಲುವು ಪಡೆದರೆ ಏನು ಬಹುಮಾನವಿದೆ?
    • - ಪ್ರಥಮ ಬಹುಮಾನ ರೂ. 50,000/-
      - ದ್ವಿತೀಯ ಬಹುಮಾನ ರೂ. 25,000/-
      - ತೃತೀಯ ಬಹುಮಾನ ರೂ. 15,000/-
    • ತೀರ್ಪುಗಾರರಿಂದ ಆಯ್ಕೆಯಾದ ಇತರ ಶ್ಲಾಘನೀಯ ಕೊಡುಗೆಗಳಿಗಾಗಿ ನಾವು ಟ್ರೋಫಿಗಳನ್ನು ನೀಡುತ್ತೇವೆ.

ಎಷ್ಟು ಜನ ವಿಜೇತರಿರುವರು?

  • • ಎಷ್ಟು ಜನ ವಿಜೇತರನ್ನು ಆಯ್ಕೆ ಮಾಡಲಾಗುವುದು?
    • ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ ಮೂರು ಜನ ವಿಜೇತರಿಗೆ ಬಹುಮಾನ ನೀಡಲಾಗುವುದು. ಇದಲ್ಲದೇ ಬ್ರ್ಯಾಂಡ್ ಹೆಸರು, ಲೋಗೊ ಹಾಗೂ ಟ್ಯಾಗ್‍ಲೈನ್‍ಗಳಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು. ಹೆಚ್ಚುವರಿ ಬಹುಮಾನಗಳಿಗಾಗಿ ಒಟ್ಟು ಅರ್ಜಿಗಳ ಸಂಖ್ಯೆ ಹಾಗೂ ನಿರ್ಣಾಯಕದಾರರ ನಿರ್ಧಾರದ ಮೇಲೆ ತಿರ್ಮಾನಿಸಲಾಗುವುದು. ಯಾವ ರೀತಿಯಾಗಿ ವಿಜೇತರನ್ನು ಆಯ್ಕೆ ಮಾಡಲಾಗುವುದು.

ವಿಜೇತರನ್ನು ಆಯ್ಕೆ ಮಾಡಲು ಅನುಸರಿಸುವ ಪ್ರಕ್ರಿಯೆ ಏನು?

  • •ಯಾವ ರೀತಿಯಾಗಿ ನಿರ್ಣಾಯಕರನ್ನು ಆಯ್ಕೆ ಮಾಡಲಾಗುತ್ತದೆ?
    • ಬ್ರ್ಯಾಂಡಿಂಗ್ ಹಾಗೂ ಮಾರಾಟದ ವಿಷಯಗಳಿಗೆ ಸಂಬಂಧಿಸಿದಂತಹ ಅಪಾರ ಜ್ಞಾನ ಹಾಗೂ ಅನುಭವ ಹೊಂದಿದ ಆಧಾರದ ಮೇಲೆ ನಿರ್ಣಾಯಕರನ್ನು ಆಯ್ಕೆ ಮಾಡಲಾಗುವುದು.

  • •ನಾನು ನಿರ್ಣಾಯಕರಿಂದ ಅರ್ಜಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಹಾಗೂ ಸಲಹೆ ಪಡೆಯಬಹುದೆ?
    • ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಪ್ರವೇಶಗಳನ್ನು ಹೊರತುಪಡಿಸಿ ಇನ್ನಿತರ ಅರ್ಜಿದಾರರಿಗೆ ಯಾವುದೇ ರೀತಿಯ ಮೌಲ್ಯಮಾಪನ ಅಥವಾ ಸಲಹೆ ನೀಡಲಾಗುವುದಿಲ್ಲ.

  • • ಸ್ಪರ್ಧೆಯು ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುವುದು?
    • ಪ್ರತಿ ಬಹುಮಾನಕ್ಕೆ ಸಂಬಂಧಿಸಿದಂತೆ ಮೊದಲ ಸುತ್ತಿನ ಆಯ್ಕೆ ಹಾಗೂ ಅಂತಿಮ ಮೌಲ್ಯಮಾಪನದೊಂದಿಗೆ ಆಯ್ಕೆ ಮಾಡಲಾಗುವುದು. ಅಂತಿಮ ಮೌಲ್ಯಮಾಪನವನ್ನು ಎಲ್ಲಾ ಅನುಭವಿ ನಿರ್ಣಾಯಕರು ಗಂಭೀರವಾದ ಚರ್ಚೆಯ ನಂತರ ನಿರ್ಧರಿಸಲಾಗುವುದು.

  • • ಎಲ್ಲಿ ಹಾಗೂ ಯಾವಾಗ ಅಂತಿಮ ಮೌಲ್ಯಮಾಪನವನ್ನು ಹಮ್ಮಿಕೊಳ್ಳಲಾಗುವುದು?
    • ಅಂತಿಮ ಮೌಲ್ಯಮಾಪನವನ್ನು ಆಗಸ್ಟ್ 2022ರ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗುವುದು. ಮೌಲ್ಯಮಾಪನದ ಸ್ಥಳವನ್ನು ಬಹಿರಂಗಪಡಿಸಲಾಗುವುದಿಲ್ಲ.

  • • ಸ್ಪರ್ಧೆಯ ನಿರ್ಣಾಯಕರು ಯಾರೆಂದು ನಾವು ತಿಳಿಯಬಹುದೆ?
    • ಮೌಲ್ಯಮಾಪನದ ವಸ್ತುನಿಷ್ಠೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಣಾಯಕ ತಂಡದ ಹೆಸರನ್ನು ಬಹಿರಂಗ ಪಡಿಸಲಾಗುವುದಿಲ್ಲ.

  • • ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಹೇಗೆ ವಿತರಿಸಲಾಗುವುದು?
    • ಸ್ಪರ್ಧೆಯಲ್ಲಿ ವಿಜೇತರಾದವರನ್ನು ಅಂತಿಮ ಫಲಿತಾಂಶಗಳು ಪ್ರಕಟವಾದ ನಂತರ ಸಂಪರ್ಕಿಸಿ ಅವರ ಬ್ಯಾಂಕ್ ವಿವರವನ್ನು ಪಡೆದು ನೇರವಾಗಿ ಅವರ ಖಾತೆಗೆ ಬಹುಮಾನದ ಮೊತ್ತವನ್ನು ವರ್ಗಾಹಿಸಲಾಗುವುದು.

ನಾನು ಎಷ್ಟು ನಮೂನೆಗಳನ್ನು/ ಅರ್ಜಿಗಳನ್ನು ಸಲ್ಲಿಸಬಹುದು?

  • • ನಾನು ತಪ್ಪಾಗಿ ಪ್ರವೇಶ ಪತ್ರದ ಕೇಲವು ಭಾಗಗಳನ್ನು ಖಾಲಿ ಬಿಟ್ಟರೆ ಏನಾಗುವುದು?
    • ಅರ್ಜಿ ಫಾರ್ಮ್‍ ನಲ್ಲಿ ಅವಶ್ಯಕವಿರುವ ಎಲ್ಲಾ ವಿಭಾಗಗಳನ್ನು ಸಾಮಾನ್ಯವಾಗಿ ತುಂಬದೆ ಅರ್ಜಿಸಲ್ಲಿಸಲು ಸಾಧ್ಯವಾಗುದಿಲ್ಲ. ಕಡ್ಡಾಯವಾಗಿ ತುಂಬಬಹುದಾದ ಎಲ್ಲಾ ವಿಭಾಗಗಳನ್ನು ತುಂಬದೇ ಅರ್ಜಿಸಲ್ಲಿಸಲು ಪ್ರಯತ್ನಿಸಿದರೆ ಪರದೆಯ ಮೇಲೆ ಅರ್ಜಿ ಅಪೂರ್ಣ ಎಂದು ಸೂಚಿಸಲಾಗುವುದು ಆದ್ದರಿಂದ ಅರ್ಜಿಯಲ್ಲಿ ಯಾವುದೇ ಭಾಗವನ್ನು ಭರ್ತಿಮಾಡದೆ ಬಿಡಬೇಡಿರಿ.

  • • ಒಮ್ಮೆ ಅರ್ಜಿಯನ್ನು ಸಲ್ಲಿಸಿದ ನಂತರ ಅದನ್ನು ರದ್ದುಪಡಿಸಿ ಮತ್ತೊಂದು ಅರ್ಜಿಯನ್ನು ಸಲ್ಲಿಸಬಹುದೇ?
    • ಇಲ್ಲ, ಇದು ಸಾಧ್ಯವಿರುವುದಿಲ್ಲ. ಆದಾಗ್ಯೂ ಪ್ರವೇಶಸಲ್ಲಿಸಲು ನಿಗಧಿಪಡಿಸಿದ ಅವಧಿಯಲ್ಲಿ ನೀವು ನಿಮ್ಮ ಅರ್ಜಿ ಅಥವಾ ಪ್ರವೇಶವನ್ನು ರದ್ದುಪಡಿಸಲು ಇಚ್ಛಿಸಿದರೆ ಈ ಕೆಳಗಿನ ಇಮೇಲ್ ಮೂಲಕ ಸಹಾಯಕ್ಕಾಗಿ ಸಂಪರ್ಕಿಸಬಹುದಾಗಿದೆ. ಇಮೇಲ್: enablethefarmer@gmail.com ಪ್ರವೇಶಕ್ಕಾಗಿ ನಿಗಧಿಪಡಿಸಲಾದ ಅವಧಿಯು ಮುಕ್ತಾಯವಾದ ನಂತರ ಪ್ರವೇಶಗಳನ್ನು ರದ್ದುಪಡಿಸುವುದಕ್ಕಾಗಿ ಆಗಲಿ ಅಥವಾ ಸಲ್ಲಿಸಲಿಕ್ಕಾಗಲ್ಲಿ ಸಾಧ್ಯವಾಗುವುದಿಲ್ಲ. ಅಂತಹ ವಿನಂತಿಗಳನ್ನು ಸ್ವೀಕರಿಸಲಾಗುವುದಿಲ್ಲ.

  • • ನಾನು ಒಂದಕ್ಕಿಂತ ಹೆಚ್ಚು ಕಲ್ಪನೆ (ಆಡಿಯೋ) ಗಳನ್ನು ಸಲ್ಲಿಸಬಹುದೆ?
    • ಪ್ರತಿಯೊಬ್ಬ ವ್ಯಕ್ತಿಯಿಂದ ಒಂದು ಕಲ್ಪನೆಯನ್ನು ಮಾತ್ರ ಪರಿಗಣಿಸಲಾಗುವುದು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಲ್ಪನೆಗಳನ್ನು ಸಲ್ಲಿಸಿದರೆ ಮೊದಲು ಸಲ್ಲಿಸಿದ ಕಲ್ಪನೆಯನ್ನು ಮಾತ್ರ ಪರಿಗಣಿಸಲಾಗುವುದು.

  • • ನಾನು ಬ್ರ್ಯಾಂಡ್ ಹೆಸರು, ಟ್ಯಾಗ್‍ಲೈನ್ ಹಾಗೂ ಲೋಗೊಗಳನ್ನು ಒಳಗೊಂಡ ಮೂರು ಭಾಗಗಳನ್ನು ಸ್ಪರ್ಧೆಯ ಭಾಗವಾಗಿ ಸಲ್ಲಿಸಬೇಕೆ?
    • ಹೌದು, ಸ್ಪರ್ಧೆಯಲ್ಲಿ ಭಾಗವಹಿಸಲು ಮೇಲಿನ ಮೂರು ಭಾಗಗಳನ್ನು ಕಲ್ಪನೆಗಳನ್ನು ಸಲ್ಲಿಸಬೇಕು.

ಬ್ರ್ಯಾಂಡ್ ಹೆಸರು, ಟ್ಯಾಗ್‍ಲೈನ್ ಹಾಗೂ ಲೋಗೊಗಳಿಗೆ ಸಂಬಂಧಿಸಿದ ನಿರೀಕ್ಷೆಗಳೇನು?

  • • ಬ್ರ್ಯಾಂಡ್ ಹೆಸರಿನ ಅರ್ಥವೇನು?
    • ಕರ್ನಾಟಕದಲ್ಲಿರುವ ರೈತ ಉತ್ಪಾದಕ ಸಂಸ್ಥೆಗಳ ಎಲ್ಲಾ ಉತ್ಪನ್ನಗಳನ್ನು ಬ್ರ್ಯಾಂಡ್ ಹೆಸರು ಎಂಬ ಸಾಮಾನ್ಯ ಹೆಸರಿನಡಿಯಲ್ಲಿ ಮಾರಾಟ ಮಾಡಲಾಗುವುದು. ಇದು ಕರ್ನಾಟಕದ ಉತ್ಪನ್ನಗಳನ್ನು ಇತರರ ಉತ್ಪನ್ನಗಳಿಂದ ಭಿನ್ನವಾಗಿ ಗುರುತಿಸುವಲ್ಲಿ ಸಹಕಾರಿ ಯಾಗುವುದಲ್ಲದೇ ಉತ್ಪನ್ನಗಳ ಧೃಡಿಕರಣವನ್ನು ಪರೀಕ್ಷಿಸಲು ಸಹಾಯವಾಗುವುದು.

  • • ಟ್ಯಾಗಲೈನ್ ಅರ್ಥವೇನು?
    • ಟ್ಯಾಗಲೈನ್ ಪ್ರಮುಖವಾಗಿ ಐದು ಪದಗಳನ್ನು ಹೊಂದಿದ ವಾಕ್ಯವಾಗಿದ್ದು ಅಥವಾ ಸ್ಲೋಗನ್ ಆಗಿದ್ದು ಅದು ಬ್ರ್ಯಾಂಡ್ ನ ಸಂದೇಶವನ್ನು ಸ್ಪಷ್ಟವಾಗಿ ತಿಳಿಸುವಂತಿರಬೇಕು. ರಾಜ್ಯದ ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತು ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಬ್ರ್ಯಾಂಡ್ ನೇಮ್ ದೊಂದಿಗೆ ಇದನ್ನು ಉಪಯೋಗಿಸುವ ಮೂಲಕ ಬ್ರ್ಯಾಂಡ್ ನೇಮ್ ಗೆ ಒತ್ತು ನೀಡುವಲ್ಲಿ ಸಹಕಾರಿಯಾಗುವುದು.

  • • ಲೋಗೊ ಎಂದರೇನರ್ಥ?
    • ಲೋಗೊ ಅಥವಾ ಲಾಂಛನವೆಂದರೆ ಬ್ರ್ಯಾಂಡ್ ನ ಶಕ್ತಿಯುತವಾದ ಚಿತ್ರಣವಾಗಿದೆ.

  • • ದಯವಿಟ್ಟು ನನಗೆ ಬ್ರ್ಯಾಂಡ್ ನೇಮ್, ಟ್ಯಾಗಲೈನ್ ಹಾಗೂ ಲಾಂಛನಗಳಿಗೆ ಸಂಬಂಧಿಸಿದಂತೆ ಗಾತ್ರ ಹಾಗೂ ಸ್ವರೂಪ ತಿಳಿಸಿ.
    • - ಬ್ರ್ಯಾಂಡ್ ನೇಮ್ ಹಾಗೂ ಟ್ಯಾಗಲೈನ್‍ಗೆ ಸಂಬಂಧಿಸಿದಂತೆ ಕನ್ನಡ ಅಥವಾ ಇಂಗ್ಲೀಷನಲ್ಲಿರಬೇಕು.
      - ಲಾಂಛನ ಅಥವಾ ಲೋಗೊಗೆ ಸಂಬಂಧಿಸಿದ ಸಲ್ಲಿಕೆಗಳು 10ಎಂ.ಬಿ ಗಾತ್ರದೊಳಗಿರಬೇಕು.

  • • ನಾನು ಅರ್ಜಿ ಹಾಗೂ ವಿವರಗಳನ್ನು ಕನ್ನಡದಲ್ಲಿ ಸಲ್ಲಿಸಬಹುದೆ?
    • ಹೌದು, ಕನ್ನಡ ಹಾಗೂ ಇಂಗ್ಲೀಷ ಭಾಷೆಗಳಲ್ಲಿ ಅರ್ಜಿ ಸಲ್ಲಿಕೆಗಳನ್ನು ಸ್ವೀಕರಿಸಲಾಗುವುದು.

  • • ನನಗೆ ಕಾಪಿರೈಟ್ ಹಕ್ಕುಸ್ವಾಮ್ಯ ಅಥವಾ ಟ್ರೇಡ್‍ಮಾರ್ಕ್ ಹೇಗೆ ಪರಿಕ್ಷೀಸಬೇಕೆಂದು ಗೊತ್ತಿಲ್ಲ.

  • •ನನ್ನ ಡೇಟಾ ಯಾವುದೇ ಕಾರಣದಿಂದ ಡೇಟಾ ವರ್ಗಾವಣೆಯ ಸಂದರ್ಭದಲ್ಲಿ ಹಾನಿಯಾದರೆ ಏನಾಗೂವುದು?
    • ಇದಕ್ಕಾಗಿ ನಿಮ್ಮ ಡೇಟಾವನ್ನು ಸಲ್ಲಿಸುವದಕ್ಕಿಂತ ಮೊದಲು ಅದರ ಬ್ಯಾಕಪ್‍ನ್ನು ಸೂಕ್ತವಾಗಿ ಸಂಗ್ರಹಿಸಿಡುವ ವ್ಯವಸ್ಥೆ ಮಾಡಿಕೊಳ್ಳಿರಿ. ಡೇಟಾ ಸಲ್ಲಿಸುವಾಗ ಸೂಕ್ತವಾದ ಅಂತರಜಾಲದ ನೆಟ್‍ವರ್ಕ್ ಇರುವ ಹಾಗೆ ಖಾತರಿ ಪಡಿಸಿಕೊಳ್ಳಿರಿ.

  • • ನಾನು ರೂಪಿಸಿದ ಲೋಗೊವನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬಹುದೇ?
    • ಇಲ್ಲ, ಲೋಗೊವನ್ನು ಜೆಪಿಜಿ ಅಥವಾ ಪಿಎನ್‍ಜಿ ರೂಪದಲ್ಲಿ ಮಾತ್ರ ಸಲ್ಲಿಸಬಹುದಾಗಿ.

  • • ನನಗೆ ನನ್ನ ಪ್ರವೇಶ ಅರ್ಜಿಯನ್ನು ಗೂಗಲ್ ಫಾರ್ಮ್ ರೂಪದಲ್ಲಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ, ನಾನೇನು ಮಾಡಬೇಕು?
    • ಸಹಾಯಕ್ಕಾಗಿ ಇಲ್ಲಿಗೆ ಇಮೇಲ್ ಕಳಿಸಿರಿ. ಮಿಂಚಂಚೆ: enablethefarmer@gmail.com

ರೈತರು ಮತ್ತು ರೈತ ಉತ್ಪಾದಕರ ಸಂಸ್ಥೆಗಳ ಬಗ್ಗೆ ನಾನು ಹೆಚ್ಚು ತಿಳಿಯುವುದು ಹೇಗೆ?

  • • ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ಎಂದರೇನು?
    • ಇದು ಒಂದು ವಿಧದ ಉತ್ಪಾದಕ ಸಂಸ್ಥೆ ಆಗಿದ್ದು ಅಲ್ಲಿ ಸದಸ್ಯರು ರೈತರು, ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ ಎಫ್‌ಪಿಒಗಳ ಪ್ರಚಾರಕ್ಕೆ ಬೆಂಬಲವನ್ನು ನೀಡುತ್ತಿದೆ. ಉತ್ಪಾದಕ ಸಂಸ್ಥೆ ಎನ್ನುವುದು ಯಾವುದೇ ಉತ್ಪನ್ನಗಳ ಉತ್ಪಾದಕರ ಸಂಘಟನೆಯ ಒಂದು ಸಾಮಾನ್ಯ ಹೆಸರು, ಉದಾ. ಕೃಷಿ, ಕೃಷಿಯೇತರ ಉತ್ಪನ್ನಗಳು, ಕುಶಲಕರ್ಮಿ ಉತ್ಪನ್ನಗಳು, ಇತ್ಯಾದಿ.

  • • ಎಫ್‌ಪಿಒನ ಅವಶ್ಯಕತೆ ಏನು, ಅದು ರೈತರಿಗೆ ಹೇಗೆ ಸಹಾಯ ಮಾಡುತ್ತದೆ?
    • ಎಫ್‌ಪಿಒನ ಅಂತಿಮ ಗುರಿ ರೈತರ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಉದಯೋನ್ಮುಖ ಮಾರುಕಟ್ಟೆ ಅವಕಾಶಗಳಲ್ಲಿ ಅವರ ಪ್ರಯೋಜನವನ್ನು ಹೆಚ್ಚಿಸುವುದು. ಎಫ್‌ಪಿಒನ ಮಾಲೀಕತ್ವವು ರೈತರ ಮೇಲೆ ಇರುತ್ತದೆ ಮತ್ತು ನಿರ್ವಹಣೆಯನ್ನು ಸದಸ್ಯರು/ ರೈತರ ಪ್ರತಿನಿಧಿಗಳ ಮೂಲಕ ಮಾಡಲಾಗುತ್ತದೆ, ಸಾಮಾನ್ಯವಾಗಿ ಚುನಾಯಿತ ಆಡಳಿತ ಮಂಡಳಿ/ ನಿರ್ದೇಶಕರ ಮಂಡಳಿಯನ್ನು ಒಳಗೊಂಡಿರುತ್ತದೆ. ಗಳಿಸಿದ ಲಾಭದ ಒಂದು ಭಾಗವನ್ನು ಉತ್ಪಾದಕರಿಗೆ ಹಂಚಲಾಗುತ್ತದೆ ಮತ್ತು ಹೆಚ್ಚುವರಿವನ್ನು ವ್ಯಾಪಾರ ವಿಸ್ತರಣೆಗಾಗಿ ಎಫ್‌ಪಿಒಗೆ ಹೂಡಿಕೆ ಮಾಡಲಾಗುತ್ತದೆ.

  • • ಬ್ರ್ಯಾಂಡಿಂಗ್ ಅಡಿಯಲ್ಲಿ ಬರುವ ಉತ್ಪನ್ನಗಳು ಯಾವುವು?
    • ಕಾರ್ಯಕ್ರಮದ ಅಂತಿಮ ದೃಷ್ಟಿಕೋನವೆಂದರೆ ಕರ್ನಾಟಕದ ಎಫ್‌ಪಿಒ ಗಳ ಸಂಪೂರ್ಣ ಉತ್ಪನ್ನಗಳನ್ನು ಒಂದು ಅಬ್ರೆಲಾ ಬ್ರ್ಯಾಂಡಿಂಗ್ ಮತ್ತು ನಂತರ ವಿಭಿನ್ನ ಉಪ-ಬ್ರ್ಯಾಂಡಿಂಗ್‌ಗಳ ಅಡಿಯಲ್ಲಿ ಒಳಗೊಂಡಿದೆ. ದ್ವಿದಳ ಧಾನ್ಯಗಳು, ರಾಗಿ, ಜೋಳ, ಬೆಲ್ಲ, ಜೇನು, ಮೆಣಸಿನಕಾಯಿ, ಅರಿಶಿನ, ಮೆಣಸು ಮುಂತಾದವುಗಳನ್ನು ಒಳಗೊಂಡಿರುವ ಸ್ಟೇಪಲ್ಸ್ ಶ್ರೇಣಿಯನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ತರುವಾಯ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು. ಆದ್ದರಿಂದ, ಬ್ರ್ಯಾಂಡ್ ಹೆಸರು ಬ್ರ್ಯಾಂಡ್‌ಗೆ ಸಾಧ್ಯವಿರುವ ಎಲ್ಲಾ ವಿಸ್ತರಣೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

  • • ಎಫ್‌ಪಿಒ ಅನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನನಗೆ ಕೆಲವು ಉಲ್ಲೇಖಗಳು ಯಾವುವು?

ಫಲಿತಾಂಶಗಳ ಘೋಷಣೆ ಮತ್ತು ಪ್ರಶಸ್ತಿ ವಿಜೇತ ಕೃತಿಗಳ ಬಗ್ಗೆ

  • • ಫಲಿತಾಂಶಗಳು ಯಾವಾಗ ಲಭ್ಯವಿರುತ್ತವೆ ಮತ್ತು ನಾನು ಅವನ್ನು ಹೇಗೆ ತಿಳಿಯುತ್ತೇನೆ?
    • ಪ್ರಶಸ್ತಿ ವಿಜೇತರಿಗೆ ಮಾತ್ರ ನೋಂದಾಯಿತ ಇಮೇಲ್ ವಿಳಾಸಕ್ಕೆ ಅಥವಾ 15ನೇ ಆಗಸ್ಟ್ 2022 ಕ್ಕೆ ಇಮೇಲ್ ಮೂಲಕ ಸೂಚಿಸಲಾಗುತ್ತದೆ. ಪ್ರಶಸ್ತಿ ವಿಜೇತರು ಮತ್ತು ಪ್ರಶಸ್ತಿ ವಿಜೇತ ಕೃತಿಗಳನ್ನು ಈ ವೆಬ್‌ಸೈಟ್‌ನಲ್ಲಿ ಆಗಸ್ಟ್ 2022 ರ ಕೊನೆಯ ವಾರದಲ್ಲಿ ಘೋಷಿಸಲು ಯೋಜಿಸಲಾಗಿದೆ.

  • • ಫಲಿತಾಂಶಗಳನ್ನು ಘೋಷಿಸಲಾಗಿದೆಯೇ? ನಾನು ಪ್ರಶಸ್ತಿಯನ್ನು ಗೆದ್ದಿದ್ದರೆ ದಯವಿಟ್ಟು ಹೇಳಿ.
    • ಪ್ರಶಸ್ತಿ ವಿಜೇತರನ್ನು ಇಮೇಲ್ ಮೂಲಕ ಆಗಸ್ಟ್ 4ನೇ ವಾರ 2022ರೊಳಗೆ ಸಂಪರ್ಕಿಸಲಾಗುವುದು. ಪ್ರಶಸ್ತಿ ವಿಜೇತ ಕೃತಿಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಆಗಸ್ಟ್ 2022ರೊಳಗೆ ಪೋಸ್ಟ್ ಮಾಡಲು ಯೋಜಿಸಲಾಗಿದೆ. ಫಲಿತಾಂಶಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುವುದಿಲ್ಲ.

  • • ನಾನು ಪ್ರಶಸ್ತಿಯನ್ನು ಗೆಲ್ಲಲಿಲ್ಲ, ನನ್ನ ಪ್ರವೇಶ ಏಕೆ ಗೆಲ್ಲಲಿಲ್ಲ ಎಂದು ನನಗೆ ತಿಳಿಸುವಿರಾ?
    • ವೈಯಕ್ತಿಕವಾಗಿ ಸಲ್ಲಿಸಿದ ಕೃತಿಗಳಿಗಾಗಿ ನಾವು ಮೌಲ್ಯಮಾಪನಗಳನ್ನು ಅಥವಾ ಕಾಮೆಂಟ್‌ಗಳನ್ನು ಒದಗಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಯಾವುದೇ ಇಮೇಲ್‌ಗಳನ್ನು ಮನರಂಜಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವು ಅಂತಿಮವಾಗಿರುತ್ತದೆ.

  • • ಪ್ರಶಸ್ತಿಗಳನ್ನು ಪಡೆಯಲು ವಿಜೇತ ಕೃತಿಗಳನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯಲು ನಾನು ಬಯಸುತ್ತೇನೆ.
    • ನಮ್ಮ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಕೆಲಸಗಳ ಹೊರತಾಗಿ ನಾವು ಯಾವುದೇ ಹೆಚ್ಚಿನ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯವಿಲ್ಲ.

ಪ್ರಶಸ್ತಿಗಳ ಬಗ್ಗೆ

  • • ನಾನು ಪ್ರಶಸ್ತಿಯನ್ನು ಗೆದ್ದರೆ, ಬಹುಮಾನದ ಮೊತ್ತ ಮತ್ತು ಪ್ರಶಸ್ತಿಯನ್ನು ನನಗೆ ಕಳುಹಿಸಲಾಗುತ್ತದೆಯೇ?
    • ಪ್ರಶಸ್ತಿ ವಿತರಣಾ ವಿಧಾನಗಳಿಗೆ ಸಂಬಂಧಿಸಿದಂತೆ ನಾವು ಪ್ರತಿ ಬಹುಮಾನ ವಿಜೇತರನ್ನು ಪ್ರತ್ಯೇಕವಾಗಿ ಸಂಪರ್ಕಿಸುತ್ತೇವೆ

  • • ನಾನು ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ನನ್ನ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವೇ?
    • ಹೌದು, ನೀವು ಪ್ರಶಸ್ತಿಯನ್ನು ಸ್ವೀಕರಿಸಬಹುದು.

ನಿಮಗೆ ಈ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳಿಂದ ಉತ್ತರ ಸಿಕ್ಕಿಲ್ಲವೆಂದಾದರೆ ದಯವಿಟ್ಟು enablethefarmer@gmail.com ಅನ್ನು ಸಂಪರ್ಕಿಸಿ